ಫಾಂಟೇನ್, ತಿಯೊಡಾರ್
1819-98. ಜರ್ಮನಿಯ ಸಂಪಾದಕ, ಕವಿ, ಕಾದಂಬರಿಕಾರ ಮತ್ತು ಪ್ರಬಂಧಕಾರ. ಫ್ರೆಂಚ್ ಮೂಲದವ. ಐತಿಹಾಸಿಕ ಅದ್ಭುತರಮ್ಯ ಸಾಹಿತ್ಯ ಪ್ರಕಾರದಲ್ಲಿ ವಿಹರಿಸುತ್ತಿದ್ದ ಈತ ಕ್ರಮೇಣ ವಾಸ್ತವತೆಯತ್ತ ಪರಿವರ್ತನೆಗೊಂಡ. ವಯಸ್ಸು ಮೂವತ್ತು ತುಂಬುವತನಕ ಗಂಭೀರ ಸಾಹಿತ್ಯ ರಚನೆಗೆ ಕೈಹಾಕಲಿಲ್ಲ. ಅರುವತ್ತರ ಅನಂತರ ಬರೆದ ಕಾದಂಬರಿಗಳು ಉತ್ಕøಷ್ಟ ಸಾಹಿತ್ಯಕೃತಿಗಳೆನಿಸಿವೆ. ಆಧುನಿಕ ಬರ್ಲಿನ್ನಿನ ದೈನಂದಿನ ಜೀವನ ಇವುಗಳಲ್ಲಿ ವರ್ಣಿತವಾಗಿರುವ ವಿಷಯ. ಪ್ರಷ್ಯನ್ ಸೈನ್ಯ 1864, 1866 ಮತ್ತು 1870ರಲ್ಲಿ ಹೂಡಿದ ಸಮರಗಳಲ್ಲಿ ಭಾಗವಹಿಸಿದ. 1870ರ ಯುದ್ಧದಲ್ಲಿ ಸೆರೆಯಾಳಾಗಿ ತುರಂಗವಾಸ ಅನುಭವಿಸಿದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ